ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1972 – ಇದು ಮೈಸೂರು ರಾಜ್ಯದ ಐದನೆಯ ವಿಧಾನಸಭೆಗೆ ಚುನಾವಣೆಗಳು (ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನವೆಂಬರ್ 1 1973ರಲ್ಲಿ ಮರುಹೆಸರಿಸಲಾಯಿತು). 1969ರ ಕಾಂಗ್ರೆಸ್ ವಿಭಜನೆಯ ನಂತರದ ರಾಜ್ಯದ ಮೊದಲ ವಿಧಾನಸಭೆ ಚುನಾವಣೆ. ಈ ವಿಭಜನೆಗೂ ತುಸು ಮುಂಚಿನಿಂದ (29 ಮೇ 1968ರಿಂದ) ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್‌ರು ಕಾಂಗ್ರೆಸ್ (ಒ) ಅಥವಾ ಸಂಸ್ಥಾ ಕಾಂಗ್ರೆಸ್‌ ಸೇರಿದರೆ ಡಿ. ದೇವರಾಜ ಅರಸ್‌ರನ್ನೂ ಒಳಗೊಂಡು ಇತರರು ಇಂದಿರಾ ಗಾಂಧಿ ಬಣದ ಕಾಂಗ್ರೆಸ್‌ಗೆ ಸೇರಿದರು. ವಿಭಜನೆಯ ನಂತರ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿ ಮುಂದುವರೆದರು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇಂದಿರಾ ಬಣ ಗೆಲುವು ಪಡೆಯಿತು ಮತ್ತು ದೇವರಾಜ ಅರಸ್‌ ಮುಖ್ಯಮಂತ್ರಿಯಾದರು. ವಿಧಾನಸಭೆಯು 24 ಮಾರ್ಚ್ 1972 ರಿಂದ 8 ಜೂನ್ 31 ಡಿಸೆಂಬರ್ 1977ರ ವರೆಗೂ ಆಸ್ತಿತ್ವದಲ್ಲಿದ್ದು ವಿಸರ್ಜಿಸಲ್ಪಟ್ಟಿತು. ಈ ಅವಧಿಯಲ್ಲಿ ಕಾಂಗ್ರೆಸ್‌ನ ಕೆ. ಎಸ್. ನಾಗರತ್ನಮ್ಮ ಅವರು ಸ್ಪೀಕರ್ ಆಗಿದ್ದರು. == ಪಲಿತಾಂಶ == == ಆಧಾರಗಳು == , 1978 2016-12-03 2016-12-03 == ಉಲ್ಲೇಖ ==